
ದೇಶದಲ್ಲಿ ಎಲ್ ನಿನೊ ಪ್ರಭಾವದಿಂದ ಮುಂಗಾರು ಮಳೆ ತಗ್ಗಿದ್ದು, ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿರುವುದರಿಂದ ರಸಗೊಬ್ಬರಗಳ ಮಾರಾಟ ಗಣನೀಯವಾಗಿ ಕಡಿಮೆಯಾಗಿದೆ.
ಏಪ್ರಿಲ್-ಸೆಪ್ಟೆಂಬರ್ 2026ರ ಅವಧಿಯಲ್ಲಿ ಕಾಂಪ್ಲೆಕ್ಸ್ ರಸಗೊಬ್ಬರಗಳ ಮಾರಾಟದಲ್ಲಿ ಶೇಕಡ 22.2ರಷ್ಟು, ಪೊಟ್ಯಾಷ್ ಶೇಕಡ 11.7ರಷ್ಟು ಹಾಗೂ ಯೂರಿಯಾ ಮಾರಾಟ ಶೇಕಡ 4.1ರಷ್ಟು ಕುಸಿದಿದೆ.
ಮಾರುಕಟ್ಟೆಯಲ್ಲಿ ಯೂರಿಯಾ ಲಭ್ಯವಿದ್ದು ಉತ್ಪಾದನೆ ಹಾಗೂ ಆಮದು ಹೆಚ್ಚಿದ್ದರೂ, ಮಳೆಯಿಲ್ಲದೆ ಬೇಡಿಕೆ ಇಲ್ಲದಿರುವುದರಿಂದ ಮತ್ತು 2026ರ ಸೆಪ್ಟೆಂಬರ್‌ನಲ್ಲಿ ಟ್ರ್ಯಾಕ್ಟರ್ ಮಾರಾಟ ಶೇ. 18.1ರಷ್ಟು ಕುಸಿದಿದೆ.