
ಡ್ರ್ಯಾಗನ್ ಹಣ್ಣುಗಳು ಕೆಂಪು ಮತ್ತು ಬಿಳಿ ಎರಡು ವಿಧಗಳಲ್ಲಿ ಸಿಗುತ್ತಿದ್ದು, ಇವೆರಡರಲ್ಲೂ ನೀರು, ಫೈಬರ್, ವಿಟಮಿನ್ಗಳು ಮತ್ತು ಆ್ಯಂಟಿಆಕ್ಸಿಡೆಂಟ್ಗಳಂತಹ ಪೋಷಕಾಂಶಗಳಿವೆ.
ಕೆಂಪು ತಿರುಳಿನ ಹಣ್ಣಿನಲ್ಲಿ ಬೆಟಾಸಯಾನಿನ್ ಸೇರಿದಂತೆ ಕೆಲವು ಆ್ಯಂಟಿಆಕ್ಸಿಡೆಂಟ್ ಸಂಯುಕ್ತಗಳು ಹೆಚ್ಚಾಗಿರುತ್ತವೆ.
ಬಿಳಿ ತಿರುಳಿನ ಹಣ್ಣು ಮೃದುವಾದ ಸಿಹಿ ಹೊಂದಿದ್ದು, ಫೈಬರ್ ಅಂಶದಿಂದಾಗಿ ಜೀರ್ಣಕ್ರಿಯೆ ಮತ್ತು ಮಲಬದ್ಧತೆ ನಿಯಂತ್ರಣಕ್ಕೆ ಸಹಕಾರಿಯಾಗಿದೆ.