
ಮಹೇಶ್ ಬಾಬು ಅವರ ಹುಟ್ಟುಹಬ್ಬಕ್ಕೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಎಐ ನಿರ್ಮಿತ ವಿಡಿಯೋ ಮೂಲಕ ಶುಭಾಶಯ ಕೋರಿದ್ದಾರೆ.
ಈ ಪೋಸ್ಟ್ನಿಂದಾಗಿ ಮಹೇಶ್ ಬಾಬು ಮತ್ತು ಸಂದೀಪ್ ರೆಡ್ಡಿ ವಂಗಾ ಕಾಂಬಿನೇಷನ್ನಲ್ಲಿ ಬರಬೇಕಿದ್ದ ‘ಡೆವಿಲ್’ ಸಿನಿಮಾ ಬಗ್ಗೆ ಮತ್ತೆ ಚರ್ಚೆಗಳು ಆರಂಭವಾಗಿವೆ.
ಮಹೇಶ್ ಬಾಬು ಅವರ ಮುಂಬರುವ ‘ವಾರಣಾಸಿ’ ಚಿತ್ರದ ಅಪ್ಡೇಟ್ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳು, ಈ ಪೋಸ್ಟ್ನತ್ತ ಹೆಚ್ಚಿನ ಗಮನ ಹರಿಸಿದ್ದಾರೆ.