
ಭಾರತೀಯ ಅಂಚೆ ಇಲಾಖೆಯು ಬೆಂಗಳೂರಿನಲ್ಲಿ 10 ಮತ್ತು ಮೈಸೂರಿನಲ್ಲಿ 1 ಸೇರಿದಂತೆ ವಿವಿಧೆಡೆ ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ.
10ನೇ ತರಗತಿ ಉತ್ತೀರ್ಣರಾಗಿ ಲಘು ಮತ್ತು ಭಾರಿ ವಾಹನ ಚಾಲನಾ ಪರವಾನಗಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, 7ನೇ ವೇತನ ಆಯೋಗದಡಿ ₹19,900 ರಿಂದ ₹63,200 ವೇತನ ಸಿಗಲಿದೆ.
ಅಭ್ಯರ್ಥಿಗಳು ಗರಿಷ್ಠ 56 ವರ್ಷದೊಳಗಿರಬೇಕು ಮತ್ತು ಲಿಖಿತ ಪರೀಕ್ಷೆ ಹಾಗೂ ಡ್ರೈವಿಂಗ್ ಟೆಸ್ಟ್ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಅರ್ಜಿಗಳನ್ನು ಅಂಚೆ ಮೂಲಕ ಕಳುಹಿಸಬೇಕು.