
ದಿವಂಗತ ನಟಿ ಶ್ರೀದೇವಿ ಅವರ ಜನ್ಮದಿನದಂದು 'ಎಂಪ್ರೆಸ್: ದಿ ಡೆಫಿನಿಟಿವ್ ಬಯಾಗ್ರಫಿ ಆಫ್ ಶ್ರೀದೇವಿ' ಪುಸ್ತಕದ ಮೊದಲ ಲುಕ್ ಅನ್ನು ಪ್ರಿಯಾಂಕಾ ಚೋಪ್ರಾ ಬಿಡುಗಡೆ ಮಾಡಿದ್ದಾರೆ.
ಧೀರಜ್ ಯು ಕುಮಾರ್ ಬರೆದಿರುವ ಈ ಪುಸ್ತಕವನ್ನು ವೆಸ್ಟ್‌ಲ್ಯಾಂಡ್ ಬುಕ್ಸ್ ಪ್ರಕಟಿಸುತ್ತಿದ್ದು, ಇದರಲ್ಲಿ ಶ್ರೀದೇವಿ ಅವರ ಬಾಲನಟಿಯ ದಿನಗಳಿಂದ ಸೂಪರ್‌ಸ್ಟಾರ್ ಪಯಣವನ್ನು ವಿವರಿಸಲಾಗಿದೆ.
1967ರ 'ಕಂದನ್ ಕರುಣೈ' ಚಿತ್ರದ ಮೂಲಕ ಬಾಲನಟಿಯಾಗಿ ವೃತ್ತಿ ಆರಂಭಿಸಿದ್ದ ಶ್ರೀದೇವಿ ಅವರಿಗೆ ಭಾರತ ಸರ್ಕಾರ 2013ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.