
ವಿದೇಶಿ ಪಿಚ್ಗಳಲ್ಲಿ ಸಚಿನ್ ತೆಂಡೂಲ್ಕರ್ಗಿಂತ ವಿರಾಟ್ ಕೊಹ್ಲಿ ಉತ್ತಮ ಎಂದು ಹೇಳಿದ್ದ ವಿವಾದಾತ್ಮಕ ಹೇಳಿಕೆಗೆ ಎಬಿ ಡಿ ವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಸಚಿನ್ ತೆಂಡೂಲ್ಕರ್ ಭಾರತೀಯ ಆಟಗಾರರಿಗೆ ವಿದೇಶದಲ್ಲಿ ಆಡುವ ದಾರಿ ತೋರಿಸಿದ ಮಾರ್ಗದರ್ಶಕರು ಎಂದು ಬಣ್ಣಿಸಿದ ಅವರು, ತಮ್ಮ ಹೇಳಿಕೆ ಕೇವಲ ವೈಯಕ್ತಿಕ ಅಭಿಪ್ರಾಯವಾಗಿತ್ತು ಎಂದು ತಿಳಿಸಿದ್ದಾರೆ.
ಅಂಕಿ-ಅಂಶಗಳನ್ನು ಮೀರಿ ಕೊಹ್ಲಿಯ ಫಿಟ್ನೆಸ್, ಆಕ್ರಮಣಕಾರಿ ಶೈಲಿ ಮತ್ತು ತಂಡವನ್ನು ಮುನ್ನಡೆಸಿದ ರೀತಿಯನ್ನು ತಾವು ಪ್ರಶಂಸಿಸಿದ್ದೇನೆಯೇ ಹೊರತು ಸಚಿನ್ ಅವರನ್ನು ಕೀಳಾಗಿ ಕಂಡಿಲ್ಲ ಎಂದು ಡಿ ವಿಲಿಯರ್ಸ್ ಸ್ಪಷ್ಟಪಡಿಸಿದ್ದಾರೆ.