
ಅತ್ತೆಯ ವಿರುದ್ಧ ದಾಖಲಾದ 498ಎ ಪ್ರಕರಣದ ವಿಚಾರಣೆ ವೇಳೆ, ದೈನಂದಿನ ಸಣ್ಣಪುಟ್ಟ ಕೌಟುಂಬಿಕ ಸಮಸ್ಯೆಗಳನ್ನು ಕ್ರೌರ್ಯ ಎಂದು ಕರೆಯಲು ಸಾಧ್ಯವೇ ಎಂದು ಹೈಕೋರ್ಟ್ ಪ್ರಶ್ನಿಸಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, ಸೊಸೆಯೊಬ್ಬರು ಅತ್ತೆ ಮತ್ತು ಪತಿಯ ವಿರುದ್ಧ ದಾಖಲಿಸಿದ್ದ ಕಿರುಕುಳ ಪ್ರಕರಣದ ಆದೇಶವನ್ನು ಕಾಯ್ದಿರಿಸಿದೆ.
ಸೊಸೆಯು ಊಟದ ತಾರತಮ್ಯ ಮತ್ತು ಶ್ಯಾಂಪೂ ಬದಲಾವಣೆಯಂತಹ ವಿಷಯಗಳನ್ನು ದೂರಿನಲ್ಲಿ ಉಲ್ಲೇಖಿಸಿದ್ದು, ಇವುಗಳನ್ನು ಅಪರಾಧ ಎಂದು ವ್ಯಾಖ್ಯಾನಿಸಲು ಬರುವುದಿಲ್ಲ ಎಂದು ನ್ಯಾಯಾಲಯ ಮೌಖಿಕವಾಗಿ ಹೇಳಿದೆ.