
ಮೈಸೂರು ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷರಾಗಿ ಬೀರಿಹುಂಡಿ ಬಸವಣ್ಣ ಅವರ ಪದಗ್ರಹಣ ಸಮಾರಂಭವು ಅಕ್ಟೋಬರ್ 4ರಂದು ನಡೆಯಿತು.
ಕಾರ್ಯಕ್ರಮದಲ್ಲಿ ನಿರ್ಗಮಿತ ಅಧ್ಯಕ್ಷ ಬಿ.ಜೆ. ವಿಜಯಕುಮಾರ್ ಅವರು ಪಕ್ಷದ ಬಾವುಟ ಹಸ್ತಾಂತರಿಸುವಾಗ ಹಸಿರು, ಬಿಳಿ ಹಾಗೂ ಕೇಸರಿ ಬಣ್ಣದ ಧ್ವಜವನ್ನು ಉಲ್ಟಾ ಕಟ್ಟಲಾಗಿತ್ತು.
ಎಂಎಲ್ಸಿ ಕೆ. ಶಿವಕುಮಾರ್ ಅವರು ಸೂಚನೆ ನೀಡಿದ ಬಳಿಕ ಮುಖಂಡರು ಎಚ್ಚೆತ್ತುಕೊಂಡು ಧ್ವಜವನ್ನು ಸರಿಪಡಿಸಿದರು.