
ಮಕ್ಕಳ ವಾಟ್ಸಾಪ್ ಖಾತೆಗಳ ಮೇಲ್ವಿಚಾರಣೆ ನಡೆಸಲು ಅನುಕೂಲವಾಗುವಂತೆ ವಾಟ್ಸಾಪ್ ಮಾತೃಸಂಸ್ಥೆ ಮೆಟಾ 'ಪೋಷಕರ ನಿಯಂತ್ರಣ' ಎಂಬ ಹೊಸ ವ್ಯವಸ್ಥೆಯನ್ನು ಅಧಿಕೃತವಾಗಿ ಜಾರಿಗೆ ತಂದಿದೆ.
ಪೋಷಕರು ತಮ್ಮ ಫೋನ್ ಮೂಲಕವೇ ಮಕ್ಕಳ ಪ್ರೊಫೈಲ್ ಫೋಟೋ ಪ್ರೈವಸಿ ಸೆಟ್ಟಿಂಗ್ಸ್ ಬದಲಾಯಿಸಬಹುದು ಹಾಗೂ ಅಪರಿಚಿತರು ಹೊಸ ಗ್ರೂಪ್ಗಳಿಗೆ ಸೇರಿಸದಂತೆ ನಿರ್ಬಂಧಿಸಬಹುದು.
ಮಕ್ಕಳು ಹೊಸ ಗ್ರೂಪ್ಗಳಿಗೆ ಸೇರಿದಾಗ ಪೋಷಕರಿಗೆ ನೋಟಿಫಿಕೇಶನ್ ಸಿಗಲಿದ್ದು, ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ಮುಂದುವರಿಯುವುದರಿಂದ ಮಕ್ಕಳ ಚಾಟ್ ಸಂದೇಶಗಳನ್ನು ಓದಲು ಸಾಧ್ಯವಿಲ್ಲ.