
ಡಾ. ರಾಜ್‌ಕುಮಾರ್ ಅಭಿನಯದ ಕ್ಲಾಸಿಕ್ ಸಿನಿಮಾ ‘ಜಗ ಮೆಚ್ಚಿದ ಮಗ’ ಈ ಬಾರಿಯ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಬಣ್ಣದ ಸ್ಪರ್ಶದೊಂದಿಗೆ (ಕಲರ್‌ನಲ್ಲಿ) ಮರುಬಿಡುಗಡೆಯಾಗಲಿದೆ.
ಪ್ರಸಾದ್ ಸ್ಟುಡಿಯೋದಲ್ಲಿ ಒಂದೂವರೆ ವರ್ಷಗಳ ಶ್ರಮದಿಂದ ಕಪ್ಪು-ಬಿಳುಪಿನಲ್ಲಿದ್ದ ಈ ಚಿತ್ರವನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ಪೂರ್ಣ ಪ್ರಮಾಣದ ಕಲರ್‌ಗೆ ಬದಲಾಯಿಸಲಾಗಿದೆ.
ಈ ಸಿನಿಮಾಗೆ ಅತ್ಯಾಧುನಿಕ '5.1 ಸೌಂಡ್ ಎಫೆಕ್ಟ್' ಹಾಗೂ ಸಿನಿಮಾಸ್ಕೋಪ್ ರೂಪವನ್ನು ನೀಡಲಾಗಿದೆ ಎಂದು ಹಿರಿಯ ನಿರ್ಮಾಪಕ ಎಸ್. ಉದಯಶಂಕರ್ ತಿಳಿಸಿದ್ದಾರೆ.