
ಉತ್ತರ ಕರ್ನಾಟಕದಲ್ಲಿ ತೀವ್ರ ಬರಗಾಲದಿಂದ ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಭವಣೆ ಹೆಚ್ಚಾಗಿದೆ.
ನೀರಿನ ಸಮಸ್ಯೆ ಪರಿಹರಿಸಲು ರಾಯಚೂರು ಪಾಲಿಕೆ ಸಹಾಯವಾಣಿ ಆರಂಭಿಸಿದ್ದು, ಕಲಬುರಗಿಯಲ್ಲಿ ನಿವಾಸಿಗಳು ಖಾಲಿ ಬಿಂದಿಗೆ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
ಬೀದರ್ನ ಕಪಲಾಪುರ ಗ್ರಾಮದ ಸಿದ್ದು ಕೋಳಾರ್ ಎಂಬುವರು ಸ್ವಂತ ಖರ್ಚಿನಲ್ಲಿ ಟ್ಯಾಂಕರ್ ಮೂಲಕ ನೀರು ತಂದು ವನ್ಯಜೀವಿಗಳ ದಾಹ ತಣಿಸುತ್ತಿದ್ದಾರೆ.