
ರಾಂಚಿಯಲ್ಲಿ ನಡೆದ ಭಾರತ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ವೆಸ್ಟ್ ಇಂಡೀಸ್ ಆಟಗಾರರಾದ ರೋವ್‌ಮನ್ ಪೊವೆಲ್ ಹಾಗೂ ಶೆರ್ಫೇನ್ ರದರ್‌ಫೋರ್ಡ್‌ಗೆ ಐಸಿಸಿ ಎಚ್ಚರಿಕೆ ನೀಡಿದೆ.
ಔಟ್ ಆದ ಬಳಿಕ ಬ್ಯಾಟ್‌ನಿಂದ ಚೆಂಡನ್ನು ಹೊಡೆದ ಪೊವೆಲ್ ಮತ್ತು ಅಂಪೈರ್ ನಿರ್ಧಾರಕ್ಕೆ ಅಸಮ್ಮತಿ ಸೂಚಿಸಿದ ರದರ್‌ಫೋರ್ಡ್‌ಗೆ ತಲಾ ಒಂದು ಡಿಮೆರಿಟ್ ಪಾಯಿಂಟ್ ಸೇರಿಸಲಾಗಿದೆ.
ಮ್ಯಾಚ್ ರೆಫ್ರಿ ಪ್ರಕಾಶ್ ಭಟ್ ಪ್ರಸ್ತಾಪಿಸಿದ ಶಿಕ್ಷೆಯನ್ನು ಆಟಗಾರರು ಒಪ್ಪಿಕೊಂಡಿದ್ದು, ಇದು ಹಂತ-1ರ ಅಪರಾಧವಾಗಿದೆ ಎಂದು ತಿಳಿಸಲಾಗಿದೆ.