Entertainment
‘ರಾಮಾಯಣ’ ಚಿತ್ರದಲ್ಲಿ ಶ್ರೀರಾಮನನ್ನು ಆ್ಯಕ್ಷನ್ ಹೀರೋ ಮಾಡಿದ್ದಕ್ಕೆ ಮುಕೇಶ್ ಖನ್ನಾ ಆಕ್ರೋಶ

‘ರಾಮಾಯಣ’ ಚಿತ್ರದಲ್ಲಿ ಶ್ರೀರಾಮನನ್ನು ಆ್ಯಕ್ಷನ್ ಹೀರೋ ಮಾಡಿದ್ದಕ್ಕೆ ಮುಕೇಶ್ ಖನ್ನಾ ಆಕ್ರೋಶ

tv9kannada1h
THE BRIEF
1

ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದಲ್ಲಿ ರಣಬೀರ್ ಕಪೂರ್ ಅವರನ್ನು ಶ್ರೀರಾಮನ ಪಾತ್ರಕ್ಕೆ ಆಯ್ಕೆ ಮಾಡಿರುವುದನ್ನು ಹಾಗೂ ರಾಮನನ್ನು ಮಾಸ್ ಆ್ಯಕ್ಷನ್ ಹೀರೋ ರೀತಿಯಲ್ಲಿ ಬಿಂಬಿಸಿರುವುದನ್ನು ಹಿರಿಯ ನಟ ಮುಕೇಶ್ ಖನ್ನಾ ಖಾರವಾಗಿ ಟೀಕಿಸಿದ್ದಾರೆ.

2

ಶ್ರೀರಾಮ ಮರ ಹತ್ತಿ ಬಾಣ ಬಿಡುವಂತಹ ಆ್ಯಕ್ಷನ್ ದೃಶ್ಯಗಳು ಯಾವುದೇ ಪೌರಾಣಿಕ ಗ್ರಂಥಗಳಲ್ಲಿ ಅಥವಾ ರಾಮಲೀಲೆಯಲ್ಲಿ ಇಲ್ಲ ಎಂದಿರುವ ಅವರು, ರಾಮ ಎಂದರೆ ಮರ್ಯಾದಾ ಪುರುಷೋತ್ತಮ ಹೊರತು ಆ್ಯಕ್ಷನ್ ಮ್ಯಾನ್ ಅಲ್ಲ ಎಂದು ಕಿಡಿಕಾರಿದ್ದಾರೆ.

3

ಸುಮಾರು 4 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾವನ್ನು ನಮಿತ್ ಮಲ್ಹೋತ್ರಾ ಮತ್ತು ಯಶ್ ನಿರ್ಮಿಸುತ್ತಿದ್ದು, ಚಿತ್ರದಲ್ಲಿ ರಣಬೀರ್ ಕಪೂರ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ.