
ಕಲಬುರಗಿ ತಾಲ್ಲೂಕಿನ ಫರಹತಾಬಾದ್ ಗ್ರಾಮ ಪಂಚಾಯಿತಿಯ ಪಿಡಿಒ ಪ್ರೇಮಾ ಎಸ್. ಅವರನ್ನು ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಸಂಕನೂರ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಪಂಚಾಯಿತಿಗೆ ಉತ್ತಮ ಕರ ವಸೂಲಿಯಾಗುತ್ತಿದ್ದರೂ ಬೀದಿ ದೀಪಗಳನ್ನು ಅಳವಡಿಸದೆ ಇರುವುದು ಹಾಗೂ ಕಚೇರಿ ಎದುರೇ ಚರಂಡಿ ತುಂಬಿ ಹರಿದು ದುರ್ವಾಸನೆ ಬರುತ್ತಿದ್ದರೂ ಸ್ವಚ್ಛಗೊಳಿಸಲು ಕ್ರಮ ಕೈಗೊಂಡಿರಲಿಲ್ಲ.
ಈ ಲೋಪದ ಕುರಿತು ಗ್ರಾಮದ 50ಕ್ಕೂ ಅಧಿಕ ಮಹಿಳೆಯರು ಧರಣಿ ನಡೆಸಿದ್ದರು. ತಾಲ್ಲೂಕು ಪಂಚಾಯಿತಿ ಇಒ ಪರಿಶೀಲನೆ ನಡೆಸಿ ನೀಡಿದ ವರದಿ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ.