
ಕರ್ನಾಟಕ ಲೋಕಸೇವಾ ಆಯೋಗದ ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಜನವರಿ 7ರಂದೇ ಅಂದರೆ ಪರೀಕ್ಷೆಗೂ ಮುನ್ನವೇ ಮಧ್ಯವರ್ತಿ ಬಸವರಾಜ್ ಕನ್ನಾಳೆಗೆ ಪೆನ್ಡ್ರೈವ್ ಮೂಲಕ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನೀಡಿದ್ದರು.
ಈ ಸಹಾಯಕ್ಕಾಗಿ ಕನ್ನಾಳೆಯಿಂದ ಸುಮಾರು 1.30 ಕೋಟಿ ರೂ. ಹಣ ಪಡೆದಿದ್ದ ಜ್ಞಾನೇಂದ್ರ ಕುಮಾರ್, ಆ ಅಕ್ರಮ ಹಣದಲ್ಲಿ ಚಿನ್ನದ ಆಭರಣಗಳನ್ನು ಖರೀದಿಸಿದ್ದರು ಎಂಬ ಅಂಶವನ್ನು ಇಡಿ ನ್ಯಾಯಾಲಯಕ್ಕೆ ತಿಳಿಸಿದೆ.
ಪ್ರಕರಣದ ತನಿಖೆ ಮುಂದುವರಿದಿದ್ದು, ಅಭ್ಯರ್ಥಿಗಳೊಂದಿಗೆ ನೇರ ಸಂಪರ್ಕ ಹೊಂದಿದ್ದ ಕೆಪಿಎಸ್ಸಿ ಸದಸ್ಯೆ ಬಿ.ವಿ. ಗೀತಾ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯವು ದಾಳಿ ನಡೆಸಿ ಬಂಧಿಸಿದೆ.