
ಬೆಳಗಾವಿಯ ಚವ್ಹಾಟ ಗಲ್ಲಿಯಲ್ಲಿ ನಡೆದ ಭೀಕರ ಅಗ್ನಿ ಅವಘಡದಲ್ಲಿ ದಮೋನೆ ಕುಟುಂಬದ ಆರು ಜನರು ಸಜೀವ ದಹನಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿವೆ.
ಘಟನೆಗೆ ಕೆಲವೇ ಕ್ಷಣಗಳ ಮುನ್ನ ಅಂದರೆ ಮಧ್ಯರಾತ್ರಿ 1.58ಕ್ಕೆ ಕೈಯಲ್ಲಿ ಬಕೆಟ್ ಹಿಡಿದು ಬಂದ ವ್ಯಕ್ತಿಯೊಬ್ಬ ಕೇವಲ ಎರಡು ನಿಮಿಷಗಳಲ್ಲಿ ಅಲ್ಲಿಂದ ಪರಾರಿಯಾಗಿದ್ದು, ನಂತರ ಮನೆ ಹೊತ್ತಿ ಉರಿದಿದೆ.
ಆರಂಭದಲ್ಲಿ ಶಾರ್ಟ್ ಸರ್ಕ್ಯೂಟ್ ಎಂದು ಶಂಕಿಸಲಾಗಿದ್ದ ಈ ಪ್ರಕರಣವನ್ನು ಮಾರ್ಕೆಟ್ ಠಾಣೆ ಪೊಲೀಸರು ಈಗ ಕೊಲೆ ಅಥವಾ ಬೆಂಕಿ ಹಚ್ಚಿದ ಕೃತ್ಯವೆಂಬ ಅನುಮಾನದ ಮೇರೆಗೆ ತೀವ್ರ ತನಿಖೆ ನಡೆಸುತ್ತಿದ್ದಾರೆ.