
ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಗ್ರಾಮೀಣ ಬ್ಯಾಂಕುಗಳಲ್ಲಿನ 13,706 ಹುದ್ದೆಗಳನ್ನು ಭರ್ತಿ ಮಾಡಲು ಸೆಪ್ಟೆಂಬರ್ 21ರವರೆಗೆ ಅರ್ಜಿ ಆಹ್ವಾನಿಸಿದೆ.
ಈ ನೇಮಕಾತಿಯಲ್ಲಿ ಕಚೇರಿ ಸಹಾಯಕರು 8,183, ಅಸಿಸ್ಟೆಂಟ್ ಮ್ಯಾನೇಜರ್ 4,256, ಮ್ಯಾನೇಜರ್ 1,047 ಮತ್ತು ಸೀನಿಯರ್ ಮ್ಯಾನೇಜರ್ 220 ಹುದ್ದೆಗಳು ಲಭ್ಯವಿವೆ.
ಅರ್ಜಿ ಶುಲ್ಕವಾಗಿ ಸಾಮಾನ್ಯ ಅಭ್ಯರ್ಥಿಗಳು 850 ರೂಪಾಯಿ ಮತ್ತು ಎಸ್ಸಿ/ಎಸ್ಟಿ/PwBD ಅಭ್ಯರ್ಥಿಗಳು 175 ರೂಪಾಯಿಗಳನ್ನು ಆನ್ಲೈನ್ ಮೂಲಕ ಪಾವತಿಸಬೇಕು.