
ಬೆಂಗಳೂರಿನ ಗಿರಿನಗರ, ಇಂದಿರಾನಗರ, ಚಿಕ್ಕಜಾಲ ಹಾಗೂ ಗೋವಿಂದಪುರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ₹24.22 ಕೋಟಿ ಮೌಲ್ಯದ ವಿವಿಧ ಮಾದರಿಯ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಬಂಧಿತ ಏಳು ಮಂದಿ ಡ್ರಗ್ ಪೆಡ್ಲರ್ಗಳಿಂದ 11 ಕೆ.ಜಿ. 237 ಗ್ರಾಂ ಎಂಡಿಎಂಎ, 2 ಕೆ.ಜಿ. 352 ಗ್ರಾಂ ಹೈಡ್ರೊಗಾಂಜಾ ಮತ್ತು 10 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್ಕುಮಾರ್ ಸಿಂಗ್ ತಿಳಿಸಿದ್ದಾರೆ.
ಚಿಕ್ಕಜಾಲ ಠಾಣೆ ಪೊಲೀಸರು ₹1.64 ಕೋಟಿ ಮೌಲ್ಯದ ಹೈಡ್ರೊಗಾಂಜಾ ಜಪ್ತಿ ಮಾಡಿ ಜ್ಯೋತಿನಗರದ ಸಿಜೋ ಶಾಜಿ (26) ಎಂಬಾತನನ್ನು ಬಂಧಿಸಿದ್ದಾರೆ.