
ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಿಂದ ಸುಮಾರು 1 ಕೋಟಿ 9 ಲಕ್ಷ ಮತದಾರರ ಹೆಸರುಗಳು ಪಟ್ಟಿಯಿಂದ ಕೈಬಿಡಲ್ಪಡುವ ಆತಂಕವಿದೆ ಎಂದು ಸಂಘಟನೆಗಳು ಆರೋಪಿಸಿವೆ.
ಬೆಂಗಳೂರಿನ ಸುಮಾರು 3,000 ಬೂತ್ಗಳಲ್ಲಿ ಶೇಕಡಾ 60ಕ್ಕೂ ಹೆಚ್ಚು ಮತದಾರರ ಹೆಸರುಗಳು ಡಿಲೀಟ್ ಆಗುವ ಸಾಧ್ಯತೆಯಿದ್ದು, ನಟ ಪ್ರಕಾಶ್ ರಾಜ್ ಸೇರಿದಂತೆ ಹಲವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಕೆಲಸಕ್ಕಾಗಿ ಸ್ಥಳಾಂತರಗೊಂಡವರನ್ನು 'Shifted' ಎಂದು ಪರಿಗಣಿಸಿ ತರಾತುರಿಯಲ್ಲಿ ಹೆಸರು ತೆಗೆಯಲಾಗುತ್ತಿದೆ ಮತ್ತು ಅರ್ಹ ಮತದಾರರಿಗೆ ಸೂಕ್ತ ಫಾರಂಗಳು ತಲುಪುತ್ತಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.