
ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ತಡೆದು 5 ಕೋಟಿ ಜನರ ಪ್ರಾಣ ಉಳಿಸಿದ್ದೇನೆ ಹಾಗೂ ಒಟ್ಟು 8 ಯುದ್ಧಗಳನ್ನು ನಿಲ್ಲಿಸಿದ್ದೇನೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಸಿರಕ್ಯೂಸ್‌ನಲ್ಲಿ ನಡೆದ ರ್‍ಯಾಲಿಯಲ್ಲಿ ಮಾತನಾಡಿದ ಟ್ರಂಪ್, ಪ್ರಶಸ್ತಿಗಾಗಿ ಆಯ್ಕೆ ಮಾಡುವಲ್ಲಿ ನಾರ್ವೆ ತನ್ನನ್ನು ಕಡೆಗಣಿಸಿದ್ದು ಅವರಿಗೆ ಕಪ್ಪು ಚುಕ್ಕೆ ಇದ್ದಂತೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇರಾನ್ ಅಣು ಬಾಂಬ್ ಪ್ರಯೋಗಿಸುವ ತಯಾರಿಯನ್ನು ಮಧ್ಯಪ್ರಾಚ್ಯದಲ್ಲಿ ತಡೆಯುವ ಮೂಲಕ ಇತಿಹಾಸದಲ್ಲಿ ಯಾರೂ ಉಳಿಸದಷ್ಟು ಜೀವಗಳನ್ನು ತಾನು ಉಳಿಸಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.