
ಮೆಟಾ ಕಂಪನಿಯಿಂದ ಕೆಲಸ ಕಳೆದುಕೊಂಡ ಟೆಕ್ಕಿಯೊಬ್ಬರು, ನೋಟಿಸ್ ಅವಧಿಯಲ್ಲೇ ಹೊಸ ಕೆಲಸ ಪಡೆದು ಮೂರು ತಿಂಗಳ ಕಾಲ ಡಬಲ್ ಸಂಬಳ ಪಡೆಯುವ ಮೂಲಕ 30 ಸಾವಿರ ಹೆಚ್ಚುವರಿ ಉಳಿತಾಯ ಮಾಡಿದ್ದಾರೆ.
ಕಂಪನಿಯು ಕಾನೂನು ಪ್ರಕಾರ ನೀಡಿದ ಮೂರು ತಿಂಗಳ ಸಂಬಳ ಮತ್ತು ಹೊಸ ಕಂಪನಿಯ ವೇತನದ ಜೊತೆಗೆ ಸ್ಟಾಕ್ ವೆಸ್ಟ್ ಕೂಡ ಸಿಕ್ಕಿದ್ದರಿಂದ ಆರ್ಥಿಕವಾಗಿ ಲಾಭವಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ವ್ಯಕ್ತಿಯ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಇದು ಕಠಿಣ ಮಾರುಕಟ್ಟೆಯಾಗಿದ್ದು, ಮೆಟಾದಂತಹ ಕಂಪನಿಯ ವೇತನವನ್ನು ಮತ್ತೆ ಪಡೆಯುವುದು ಸುಲಭವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.