
ಕೊಪ್ಪಳ ಜಿಲ್ಲೆಯಲ್ಲಿ ಮನೆಯ ಮೇಲೆ ಮಂಗಗಳ ಶಬ್ದ ಕೇಳಿದ್ದರಿಂದ ಅಂಗಳಕ್ಕೆ ಬಂದ 91 ವರ್ಷದ ವೃದ್ಧೆ ನಜ್ಮುನ್ನಿಸಾ ಬೇಗಂ ಅವರ ಮೇಲೆ ಕೋತಿ ಹಾರಿ ತಳ್ಳಿದೆ.
ಕೋತಿಯ ದಾಳಿಯಿಂದ ಕೆಳಗೆ ಬಿದ್ದ ವೃದ್ಧೆಯ ತಲೆಗೆ ತೀವ್ರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿದರೂ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ.
ಈ ಸಂಪೂರ್ಣ ಘಟನೆಯ ದೃಶ್ಯಗಳು ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.