
ನೈಋತ್ಯ ರೈಲ್ವೆಯು ಹುಬ್ಬಳ್ಳಿ-ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ ರೈಲುಗಳ ಸೇವೆಯನ್ನು ಅಕ್ಟೋಬರ್ 4 ರಿಂದ ನವೆಂಬರ್ 30 ರವರೆಗೆ ವಿಸ್ತರಣೆ ಮಾಡಿದೆ.
ಮಂಗಳೂರು ಸೆಂಟ್ರಲ್-ಚೆನ್ನೈ ಎಗ್ಮೋರ್ ಎಕ್ಸ್ಪ್ರೆಸ್ ರೈಲು ಸೇವೆಯನ್ನು ಸಹ ಅಕ್ಟೋಬರ್ 27 ರವರೆಗೆ ವಿಸ್ತರಿಸಲಾಗಿದ್ದು, ಪ್ರಯಾಣಿಕರಿಗೆ ಹೆಚ್ಚುವರಿ ಟ್ರಿಪ್ಗಳ ಸೌಲಭ್ಯ ಸಿಗಲಿದೆ.
ಈ ರೈಲುಗಳು ಪ್ರಸ್ತುತ ಇರುವ ವೇಳಾಪಟ್ಟಿ ಮತ್ತು ನಿಲ್ದಾಣಗಳೊಂದಿಗೆ ಒಂಬತ್ತು ಹೆಚ್ಚುವರಿ ಟ್ರಿಪ್ಗಳಲ್ಲಿ ಸಂಚರಿಸಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.