
ತುಮಕೂರು ತಾಲ್ಲೂಕಿನ ಗೌರಗೊಂಡನಹಳ್ಳಿಯಲ್ಲಿ ಉರುಳಿಗೆ ಬಿದ್ದ ಚಿರತೆಯನ್ನು ಸುಟ್ಟ ಆರೋಪದ ಮೇಲೆ ಜಿ.ಡಿ.ಶಿವಕುಮಾರ್, ನಾರಾಯಣಪ್ಪ ಮತ್ತು ಚಂದ್ರಶೇಖರ್ ಎಂಬ ಮೂವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.
ಬೆಳೆ ರಕ್ಷಣೆಗಾಗಿ ಜಮೀನಿನ ಸುತ್ತ ಉರುಳು ಇಟ್ಟಿದ್ದಾಗ ಎರಡು ದಿನಗಳ ಹಿಂದೆ ಚಿರತೆ ಅದರಲ್ಲಿ ಸಿಲುಕಿತ್ತು, ನಂತರ ಆರೋಪಿಗಳು ಚಿರತೆಯನ್ನು ಸುಟ್ಟು ಆ ವಿಡಿಯೋವನ್ನು ವಾಟ್ಸ್ಆ್ಯಪ್ ಗ್ರೂಪ್‌ಗಳಲ್ಲಿ ಹಂಚಿಕೊಂಡಿದ್ದರು.
ಸ್ಥಳದಲ್ಲಿ ಸುಟ್ಟ ಮಾಂಸ ಪತ್ತೆಯಾಗಿದ್ದು, ಅದು ಚಿರತೆಯದೇ ಎಂದು ಖಚಿತಪಡಿಸಿಕೊಳ್ಳಲು ಬೆಂಗಳೂರಿನ ತಜ್ಞರ ತಂಡ ಪರೀಕ್ಷೆ ನಡೆಸಲಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಪವಿತ್ರಾ ತಿಳಿಸಿದ್ದಾರೆ.