
ಬೆಂಗಳೂರು ನಗರಾಭಿವೃದ್ಧಿ ಸಚಿವ ವ ಕೃಷ್ಣ ಬೈರೇಗೌಡ ಅವರು ಜಿಬಿಎ ವ್ಯಾಪ್ತಿಯಲ್ಲಿ 50x80 ವಿಸ್ತೀರ್ಣದ ನಿವೇಶನಗಳಿಗಾಗಿ ಸುಧಾರಿತ 'ನಂಬಿಕೆ ನಕ್ಷೆ 2.0' ತಂತ್ರಾಂಶವನ್ನು ಲೋಕಾರ್ಪಣೆಗೊಳಿಸಿದ್ದಾರೆ.
ಈ ಸ್ವಯಂಚಾಲಿತ ವ್ಯವಸ್ಥೆಯು ಸರ್ಕಾರದ ನಿಯಮಗಳಿಗೆ ಅನುಗುಣವಾಗಿರುವ 4,000 ಚದರ ಅಡಿವರೆಗಿನ 4 ಅಂತಸ್ತಿನ ವಸತಿ ಕಟ್ಟಡಗಳ ನಕ್ಷೆಯನ್ನು ಕೇವಲ 30 ನಿಮಿಷಗಳಲ್ಲಿ ಮಂಜೂರು ಮಾಡಲಿದೆ.
ಈ ಸೌಲಭ್ಯವನ್ನು ದುರುಪಯೋಗಪಡಿಸಿಕೊಂಡು ತಪ್ಪು ಮಾಹಿತಿ ನೀಡಿದರೆ ಅಥವಾ ನಿಯಮ ಉಲ್ಲಂಘಿಸಿದರೆ ದುಪ್ಪಟ್ಟು ದಂಡದ ಜೊತೆಗೆ ಕಾನೂನು ಕ್ರಮ ಜರುಗಿಸುವುದಾಗಿ ಸಚಿವರು ಎಚ್ಚರಿಸಿದ್ದಾರೆ.