
ಮುಂಬೈನ ಜಲ್ಸಾ ನಿವಾಸವನ್ನು ಬಾಂಬ್ ಇಟ್ಟು ಉಡಾಯಿಸುವುದಾಗಿ ಬೆದರಿಕೆ ಇಮೇಲ್ ಬಂದ ಹಿನ್ನೆಲೆಯಲ್ಲಿ ಅಮಿತಾಭ್ ಬಚ್ಚನ್ ಭದ್ರತಾ ದೃಷ್ಟಿಯಿಂದ ಬುಲೆಟ್ಪ್ರೂಫ್ ಗ್ಲಾಸ್ ಕವರ್ ಹಿನ್ನೆಲೆಯಿಂದ ಅಭಿಮಾನಿಗಳನ್ನು ಭೇಟಿಯಾದರು.
84 ವರ್ಷ ವಯಸ್ಸಿನ ಅಮಿತಾಭ್ ಬಚ್ಚನ್ ಪ್ರತಿ ಭಾನುವಾರ ಅಭಿಮಾನಿಗಳನ್ನು ಭೇಟಿಯಾಗುವ ವಾಡಿಕೆಯಂತೆ ಈ ಬಾರಿಯೂ ಜಲ್ಸಾ ಬಂಗಲೆಯ ಹೊರಗೆ ಆಗಮಿಸಿದ್ದು, ಅವರೊಂದಿಗೆ ಮಗ ಅಭಿಷೇಕ್ ಬಚ್ಚನ್ ಕೂಡ ಸಾಥ್ ನೀಡಿದ್ದಾರೆ.
ಇತ್ತೀಚೆಗೆ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ನಡೆದ ಘಟನೆ ಹಾಗೂ ಬೆದರಿಕೆ ಇಮೇಲ್ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಜಲ್ಸಾ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದಾರೆ.