
ಬೆಂಗಳೂರಿನಲ್ಲಿ ಜಲಮಂಡಳಿಯ ಕೊಳವೆಬಾವಿಗಳ ನಿರ್ವಹಣೆಯನ್ನು ಹೆಚ್ಚು ವೈಜ್ಞಾನಿಕಗೊಳಿಸಲು ಮಾರ್ಚ್ ಅಂತ್ಯದೊಳಗೆ 6 ಸಾವಿರ ಕೊಳವೆಬಾವಿಗಳಿಗೆ ಐಒಟಿ ಸಾಧನಗಳನ್ನು ಅಳವಡಿಸಲಾಗುವುದು.
ಒಟ್ಟು 16 ಸಾವಿರ ಕೊಳವೆಬಾವಿಗಳ ಪೈಕಿ ಈಗಾಗಲೇ 1,800ಕ್ಕೆ ಈ ಸಾಧನಗಳನ್ನು ಅಳವಡಿಸಲಾಗಿದ್ದು, ನೀರಿನ ಆಳ ಹಾಗೂ ಪಂಪ್ ಕಾರ್ಯನಿರ್ವಹಿಸುವ ಅವಧಿಯ ಮಾಹಿತಿ ರವಾನೆಯಾಗುತ್ತಿದೆ.
ಈ ಐಒಟಿ ಆಧಾರಿತ ಮೇಲ್ವಿಚಾರಣೆಯಿಂದ ಸಮಸ್ಯೆಯನ್ನು ಮುಂಚಿತವಾಗಿ ಗುರುತಿಸಿ ತಾಂತ್ರಿಕ ಹಾನಿ ಹಾಗೂ ಅನಗತ್ಯ ವೆಚ್ಚವನ್ನು ಕಡಿಮೆ ಮಾಡಬಹುದು ಎಂದು ಜಲಮಂಡಳಿ ಅಧ್ಯಕ್ಷೆ ತಿಳಿಸಿದ್ದಾರೆ.