ಜರ್ಮನಿಯ ಸ್ಯಾಕ್ಸನಿ-ಅನ್ಹಾಲ್ಟ್ ರಾಜ್ಯದ ಚುನಾವಣೆಯಲ್ಲಿ ಬಲಪಂಥೀಯ ಎಎಫ್ಡಿ ಪಕ್ಷ ಶೇ.44ರಷ್ಟು ಮತಗಳನ್ನು ಗಳಿಸಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಎರಡನೇ ಮಹಾಯುದ್ಧದ ನಂತರ ಮೊದಲ ಬಾರಿಗೆ ಬಲಪಂಥೀಯ ರಾಜಕಾರಣ ಇಷ್ಟು ಪ್ರಭಾವ ಬೀರಿದ್ದು, ಪಕ್ಷವು 83 ಸ್ಥಾನಗಳ ಪೈಕಿ ಸುಮಾರು 39 ಸ್ಥಾನಗಳನ್ನು ಗೆದ್ದಿದೆ.
ವಲಸೆ ಮತ್ತು ಇಸ್ಲಾಂ ವಿರೋಧಿ ನಿಲುವುಗಳನ್ನು ಹೊಂದಿರುವ ಎಎಫ್ಡಿಯನ್ನು ದೇಶೀಯ ಗುಪ್ತಚರ ಸಂಸ್ಥೆಯು ಶಂಕಿತ ಉಗ್ರವಾದಿ ಸಂಘಟನೆ ಎಂದು ಗುರುತಿಸಿದೆ.