
ಕರ್ನಾಟಕ ಸಿವಿಲ್ ಸೇವಾ ನಿಯಮಗಳಡಿ ಸರ್ಕಾರಿ ನೌಕರರ ಕರ್ತವ್ಯ ಲೋಪಕ್ಕೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊಸ ಮಾರ್ಗಸೂಚಿ ಹೊರಡಿಸಿದೆ.
3 ತಿಂಗಳಿಗಿಂತ ಹೆಚ್ಚಿನ ಅನಧಿಕೃತ ಗೈರುಹಾಜರಿಗೆ ಸೇವೆಯಿಂದ ವಜಾ ಹಾಗೂ ಲಂಚ ಸ್ವೀಕಾರಕ್ಕೆ ಕಡ್ಡಾಯ ನಿವೃತ್ತಿಯಂತಹ ಕಠಿಣ ಶಿಕ್ಷೆಗಳನ್ನು ವಿಧಿಸಲಾಗುವುದು.
ರಾಜಕೀಯ ಚಟುವಟಿಕೆಯಲ್ಲಿ ಭಾಗಿ ಅಥವಾ ಮಾಧ್ಯಮಗಳಲ್ಲಿ ಸರ್ಕಾರದ ವಿರುದ್ಧ ಟೀಕೆ ಮಾಡಿದರೆ ವೇತನ ಬಡ್ತಿ ತಡೆ ಸೇರಿದಂತೆ ದಂಡನೆ ವಿಧಿಸಲಾಗುತ್ತದೆ.