
ಶಕ್ತಿ ಯೋಜನೆಯ ಉಚಿತ ಟಿಕೆಟ್‌ಗಳನ್ನು ದುರ್ಬಳಕೆ ಮಾಡಿಕೊಳ್ಳುವ ಪ್ರಕರಣಗಳಿಗೆ ಕಡಿವಾಣ ಹಾಕಲು ಕೆಎಸ್‌ಆರ್‌ಟಿಸಿ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿ ಕಠಿಣ ಕ್ರಮಕ್ಕೆ ಮುಂದಾಗಿದೆ.
ಅಕ್ರಮಗಳನ್ನು ಸಾಮಾನ್ಯ, ರೆಡ್ ಜೋನ್ ಮತ್ತು ಅಸಾಧಾರಣ ಎಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ದಂಡ, ಅಮಾನತು ಅಥವಾ ವಜಾ ಕ್ರಮ ಕೈಗೊಳ್ಳಲಾಗುವುದು.
2023ರ ಜೂನ್ 11ರಂದು ಜಾರಿಗೆ ಬಂದ ಈ ಯೋಜನೆಯಡಿ, ಕೆಲವು ಕಂಡಕ್ಟರ್‌ಗಳು ಉಚಿತ ಟಿಕೆಟ್‌ಗಳನ್ನು ಅನಗತ್ಯವಾಗಿ ವಿತರಿಸಿ ಅಥವಾ ಹಣ ಪಡೆದು ದುರ್ಬಳಕೆ ಮಾಡಿಕೊಂಡಿರುವ ಆರೋಪಗಳು ಕೇಳಿಬಂದಿದ್ದವು.