
ಅನೇಕಲ್ ಬಳಿಯ ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ 'ಅಲಯನ್ಸ್ ಒನ್-2026' ಅಂತರ ಕಾಲೇಜು ಯುವಜನೋತ್ಸವದಲ್ಲಿ ವಿಜೇತರಿಗೆ ₹25 ಲಕ್ಷ ಬಹುಮಾನ ವಿತರಿಸಲಾಯಿತು.
18 ರಾಜ್ಯಗಳ 323 ಶಿಕ್ಷಣ ಸಂಸ್ಥೆಗಳ 5,790 ವಿದ್ಯಾರ್ಥಿಗಳು 68 ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದು, ಸಾಂಸ್ಕೃತಿಕ ವಿಭಾಗದಲ್ಲಿ ಕ್ರೈಸ್ಟ್ ವಿವಿ ಹಾಗೂ ಕ್ರೀಡಾ ವಿಭಾಗದಲ್ಲಿ ಪ್ರೆಸಿಡೆನ್ಸಿ ವಿವಿ ಪ್ರಥಮ ಸ್ಥಾನ ಪಡೆದವು.
ಗ್ರಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ತಂಡದವರಿಂದ ಸಂಗೀತ ಕಲಾ ಪ್ರದರ್ಶನ ಹಾಗೂ ವಿವಿಧ ರಾಜ್ಯಗಳ ನೃತ್ಯಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.