
ನಟ ವಿಜಯ ರಾಘವೇಂದ್ರ ಪ್ರಮುಖ ಪಾತ್ರದಲ್ಲಿರುವ ಸಸ್ಪೆನ್ಸ್-ಆ್ಯಕ್ಷನ್ ಸಿನಿಮಾ 'ಆನ್ ಡ್ಯೂಟಿ'ಯ ಸಾಹಸ ಸನ್ನಿವೇಶಗಳ ಚಿತ್ರೀಕರಣ ಈಚೆಗೆ ಯಶಸ್ವಿಯಾಗಿ ನಡೆಯಿತು.
ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನದಲ್ಲಿ ವಿಜಯ ರಾಘವೇಂದ್ರ, ಕೃಷ್ಣಸಾಯಿ, ಸ್ಮೃತಿ ವೆಂಕಟೇಶ್, ಭಾವನಾ ಚಂದ್ರ ಹಾಗೂ ವಿನಯಾ ಪ್ರಸಾದ್ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಈ ಚಿತ್ರದ ಶೇ 75ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಪ್ರಸ್ತುತ ಸಾಹಸ ಸನ್ನಿವೇಶಗಳು ಮತ್ತು ಹಾಡುಗಳ ಚಿತ್ರೀಕರಣ ಬಾಕಿ ಉಳಿದಿದೆ ಎಂದು ನಿರ್ದೇಶಕ ಸಂಜೀವ್ ಮೆಗೋಟಿ ತಿಳಿಸಿದ್ದಾರೆ.