Entertainment
ಮದುವೆಯ ಮರುದಿನವೇ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿದ ನಟ ಚಿಕ್ಕಣ್ಣ ದಂಪತಿ

ಮದುವೆಯ ಮರುದಿನವೇ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿದ ನಟ ಚಿಕ್ಕಣ್ಣ ದಂಪತಿ

tv9kannada1h
THE BRIEF
1

ಕನ್ನಡದ ಖ್ಯಾತ ಹಾಸ್ಯ ನಟ ಚಿಕ್ಕಣ್ಣ ಅವರು ಪತ್ನಿ ಪಾವನಾ ಅವರೊಂದಿಗೆ ಆಗಸ್ಟ್ 31 ರಂದು ಚಾಮರಾಜನಗರ ಜಿಲ್ಲೆಯ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

2

ಆಗಸ್ಟ್ 30 ರಂದು ಮೈಸೂರಿನಲ್ಲಿ ಪಾವನಾ ಅವರೊಂದಿಗೆ ವಿವಾಹವಾಗಿದ್ದ ಚಿಕ್ಕಣ್ಣ, ಮರುದಿನವೇ ಗೆಳೆಯರೊಂದಿಗೆ ಬೆಟ್ಟಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದರು.

3

ಸದ್ಯ ಮದುವೆಯ ಸಲುವಾಗಿ ಸಿನಿಮಾಗಳಿಂದ ಬಿಡುವು ಪಡೆದಿರುವ ಚಿಕ್ಕಣ್ಣ, ದೇವಸ್ಥಾನದ ಪ್ರದಕ್ಷಿಣೆ ಹಾಕಿ ಅಲ್ಲಿನ ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಂಡರು.