
ಇಂಡೊನೇಷ್ಯಾದ ಕರಾವಳಿ ಮತ್ತು ಸುಮಾತ್ರಾದ ಉತ್ತರ ಭಾಗದಲ್ಲಿ ಶನಿವಾರ ಸಂಭವಿಸಿದ ಎರಡು ಪ್ರಬಲ ಭೂಕಂಪಗಳಲ್ಲಿ 47 ಜನರು ಮೃತಪಟ್ಟಿದ್ದಾರೆ.
ಅಮೆರಿಕದ ಭೂಸರ್ವೇಕ್ಷಣಾ ಸಂಸ್ಥೆಯ ಪ್ರಕಾರ, ಕರಾವಳಿ ಭಾಗದಲ್ಲಿ ಸಂಭವಿಸಿದ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.7ರಷ್ಟು ದಾಖಲಾಗಿದೆ.
ರಕ್ಷಣಾ ಕಾರ್ಯಕ್ಕಾಗಿ ವಿಮಾನ, ಹೆಲಿಕಾಪ್ಟರ್ ಮತ್ತು ಹಡಗುಗಳನ್ನು ಬಳಸಲಾಗುತ್ತಿದ್ದು, ಪಾಪುವಾ ನ್ಯೂಗಿನಿ ಮತ್ತು ಸ್ಪೇನ್ನಲ್ಲೂ ಭೂಕಂಪನಗಳು ವರದಿಯಾಗಿವೆ.