
ಕಳೆದ 12 ದಿನಗಳಿಂದ ಕಬ್ಬಿಗೆ ಹೆಚ್ಚಿನ ದರಕ್ಕಾಗಿ ಬೆಳಗಾವಿಯಲ್ಲಿ ನಡೆಯುತ್ತಿದ್ದ ರೈತರ ಹೋರಾಟ, ಪ್ರತಿ ಟನ್ ಕಬ್ಬಿಗೆ ₹3,600 ಬೆಲೆ ನಿಗದಿಗೊಳಿಸಿದ ಬಳಿಕ ಗುರುವಾರ ಹಿಂಪಡೆಯಲಾಗಿದೆ.
ಸಚಿವ ಸತೀಶ್ ಜಾರಕಿಹೊಳಿ ಮಧ್ಯಸ್ಥಿಕೆಯಲ್ಲಿ ಈ ದರ ನಿಗದಿಪಡಿಸಲಾಗಿದ್ದು, ಸಕ್ಕರೆ ಮಾರಾಟದಿಂದ ಹೆಚ್ಚುವರಿ ಲಾಭಾಂಶವನ್ನೂ ರೈತರಿಗೆ ನೀಡಲು ತೀರ್ಮಾನಿಸಲಾಗಿದೆ.
ಆದರೆ, ಸರ್ಕಾರ ಹೆಚ್ಚುವರಿಯಾಗಿ ₹1,000 ಪ್ರೋತ್ಸಾಹ ಧನ ಘೋಷಣೆ ಮಾಡದಿದ್ದರೆ ಮುಂದಿನ ಅಧಿವೇಶನದ ವೇಳೆ ಹೋರಾಟ ಮುಂದುವರಿಸುವುದಾಗಿ ರೈತ ಮುಖಂಡರು ಎಚ್ಚರಿಸಿದ್ದಾರೆ.