
ಸರ್ಜಿಕಲ್ ಸ್ಟ್ರೈಕ್ನ 10ನೇ ವರ್ಷದ ಅಂಗವಾಗಿ, ಭಾರತೀಯ ಸೇನೆಯು ರಾಜಸ್ಥಾನದ ರಾಷ್ಟ್ರೀಯ ಹೆದ್ದಾರಿ 911ರ ಒಂದು ಭಾಗವನ್ನು ತಾತ್ಕಾಲಿಕ ಹೆಲಿಪ್ಯಾಡ್ ಆಗಿ ಪರಿವರ್ತಿಸಿ ಸಮರಾಭ್ಯಾಸ ನಡೆಸಿದೆ.
ರುದ್ರ, ಧ್ರುವ ಮತ್ತು ಚೇತಕ್ ಹೆಲಿಕಾಪ್ಟರ್ಗಳನ್ನು ಬಳಸಿ ಹೆದ್ದಾರಿಯಲ್ಲೇ ಟೇಕ್-ಆಫ್ ಮತ್ತು ಲ್ಯಾಂಡಿಂಗ್ ನಡೆಸುವ ಮೂಲಕ ತುರ್ತು ಪರಿಸ್ಥಿತಿಯಲ್ಲಿ ಹೆದ್ದಾರಿಗಳನ್ನು ಏರ್ಬೇಸ್ಗಳಾಗಿ ಬಳಸುವ ಸಾಮರ್ಥ್ಯವನ್ನು ಪರೀಕ್ಷಿಸಲಾಯಿತು.
ಯುದ್ಧ ಅಥವಾ ತುರ್ತು ಸಂದರ್ಭಗಳಲ್ಲಿ ಮುಖ್ಯ ವಿಮಾನ ನಿಲ್ದಾಣಗಳು ಲಭ್ಯವಿಲ್ಲದಿದ್ದಾಗ ಪರ್ಯಾಯವಾಗಿ ಹೆದ್ದಾರಿಗಳನ್ನು ಹೇಗೆ ಬಳಸಬಹುದು ಎಂಬುದು ಈ ಕವಾಯತಿನ ಮುಖ್ಯ ಉದ್ದೇಶವಾಗಿತ್ತು.