
ಕಚ್ಚಾ ವಸ್ತುಗಳ ಬೆಲೆ ಏರಿಕೆ ಮತ್ತು ನಿರ್ವಹಣಾ ವೆಚ್ಚ ಹೆಚ್ಚಳದ ಕಾರಣದಿಂದ ವಾಹನಗಳ ಹೊಗೆ ತಪಾಸಣಾ ಶುಲ್ಕವನ್ನು ಹೆಚ್ಚಿಸಿ ಸಾರಿಗೆ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.
ಗಣಕೀಕರಣ ವ್ಯವಸ್ಥೆ ಅಳವಡಿಸಿಕೊಂಡಿರುವ ಕೇಂದ್ರಗಳು ಮಾತ್ರ ಪರಿಷ್ಕೃತ ಶುಲ್ಕ ವಸೂಲಿ ಮಾಡಲು ಅರ್ಹವಾಗಿದ್ದು, ಪ್ರಮಾಣಪತ್ರಗಳಲ್ಲಿ ಯಾವುದೇ ಕೈಬರಹಕ್ಕೆ ಅವಕಾಶವಿರುವುದಿಲ್ಲ.
ನಿಯಮ ಉಲ್ಲಂಘಿಸುವ ಕೇಂದ್ರಗಳ ಪರವಾನಗಿಯನ್ನು ಅಮಾನತು ಅಥವಾ ರದ್ದುಗೊಳಿಸಲಾಗುವುದು ಎಂದು ಇಲಾಖೆ ಎಚ್ಚರಿಸಿದ್ದು, ಆನ್ಲೈನ್ ಪ್ರಮಾಣಪತ್ರಗಳ ಮೇಲೆ ಹಾಲೋಗ್ರಾಂ ಮತ್ತು ಸ್ಟಿಕ್ಕರ್ ಅಂಟಿಸುವುದು ಕಡ್ಡಾಯವಾಗಿದೆ.