
ಐಪಿಎಲ್ 2027 ರ ಪ್ರಶಸ್ತಿ ಬರ ನೀಗಿಸುವ ಗುರಿಯೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಶ್ರೀಲಂಕಾದ ಮಾಜಿ ವೇಗದ ಬೌಲರ್ ಚಮಿಂದಾ ವಾಸ್ ಅವರನ್ನು ಹೊಸ ಬೌಲಿಂಗ್ ಕೋಚ್ ಆಗಿ ನೇಮಿಸಿದೆ.
52 ವರ್ಷದ ಚಮಿಂದಾ ವಾಸ್ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಒಟ್ಟು 761 ವಿಕೆಟ್ಗಳನ್ನು (ಟೆಸ್ಟ್ನಲ್ಲಿ 355, ಏಕದಿನದಲ್ಲಿ 400 ಮತ್ತು ಟಿ20ಐಗಳಲ್ಲಿ 6) ಪಡೆದಿದ್ದಾರೆ.
ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ಸೌರವ್ ಗಂಗೂಲಿ ಅವರನ್ನು ಮುಖ್ಯ ಕೋಚ್ ಆಗಿ ಮತ್ತು ಯುವರಾಜ್ ಸಿಂಗ್ ಅವರನ್ನು ಸಹಾಯಕ ಹಾಗೂ ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಿತ್ತು.