
‘ನಂದಗೋಕುಲ’ ಧಾರಾವಾಹಿಯಲ್ಲಿ ಕೇಶವ ಪಾತ್ರದ ಮೂಲಕ ಜನಪ್ರಿಯರಾಗಿದ್ದ ನಟ ಯಶ್ವಂತ್ ಕುಮಾರ್ ಅವರು ಸುಮಾರು 350 ಸಂಚಿಕೆಗಳ ನಂತರ ದಿಢೀರನೆ ಧಾರಾವಾಹಿಯಿಂದ ಹೊರಬಂದಿದ್ದಾರೆ.
ವೃತ್ತಿಪರ ಕಾರಣಗಳಿಂದಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿರುವ ಯಶ್ವಂತ್, ಅಭಿಮಾನಿಗಳಿಗೆ ಭಾವುಕ ಪತ್ರದ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.
ಧಾರಾವಾಹಿಯಿಂದ ಹೊರಬಂದಿರುವ ಯಶ್ವಂತ್ ಅವರು ಮುಂಬರುವ ‘ಸಮುದ್ರ ಮಂಥನ’ ಎಂಬ ಸಿನಿಮಾದ ಮೂಲಕ ಬೆಳ್ಳಿಪರದೆಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.