
ಕರ್ನಾಟಕದಲ್ಲಿ ಅಂಗಾಂಗಗಳ ತೀವ್ರ ಕೊರತೆಯಿದ್ದು, ಒಟ್ಟು 6,291 ಮಂದಿ ರೋಗಿಗಳು ವಿವಿಧ ಅಂಗಾಂಗ ಕಸಿಗಾಗಿ ಕಾಯುತ್ತಿದ್ದಾರೆ.
ಕಿಡ್ನಿ ಕಸಿಗಾಗಿ ಸುಮಾರು ಐದು ವರ್ಷ ಹಾಗೂ ಯಕೃತ್ತಿನ ಕಸಿಗಾಗಿ ಸುಮಾರು ನಾಲ್ಕೂವರೆ ವರ್ಷಗಳವರೆಗೆ ಕಾಯಬೇಕಾದ ಪರಿಸ್ಥಿತಿ ಇದೆ.
ಅಂಗಾಂಗ ದಾನದ ಪ್ರಮಾಣ ಹೆಚ್ಚಿಸಲು ಆರೋಗ್ಯ ಇಲಾಖೆಯು ದೂರದೃಷ್ಟಿ ಸಮಿತಿ ರಚನೆ ಹಾಗೂ ಹೊಸ ಕಾರ್ಯತಂತ್ರ ರೂಪಿಸಲು ಮುಂದಾಗಿದೆ.