
ಯುಪಿಐ ವಹಿವಾಟುಗಳ ಮೇಲೆ ಎಂಡಿಆರ್ ಶುಲ್ಕವನ್ನು ಮರುಜಾರಿಗೊಳಿಸಿದರೆ ಶೇಕಡಾ 53 ರಷ್ಟು ಗ್ರಾಹಕರು 3,000 ರೂಪಾಯಿಗಿಂತ ಹೆಚ್ಚಿನ ಪಾವತಿ ಮಾಡುವುದನ್ನು ನಿಲ್ಲಿಸಲಿದ್ದಾರೆ ಎಂದು ಲೋಕಲ್ ಸರ್ಕಲ್ಸ್ ಸಮೀಕ್ಷೆ ತಿಳಿಸಿದೆ.
ಕೇಂದ್ರ ಸರ್ಕಾರವು 2020 ರ ಜನವರಿಯಿಂದ ಸಾಮಾನ್ಯ ಯುಪಿಐ ಮತ್ತು ರುಪೇ ಡೆಬಿಟ್ ಕಾರ್ಡ್ ವಹಿವಾಟುಗಳ ಮೇಲಿನ ಎಂಡಿಆರ್ ಶುಲ್ಕವನ್ನು ಶೂನ್ಯ ಮಾಡಿತ್ತು.
ಒಂದು ವೇಳೆ ಶುಲ್ಕ ಜಾರಿಯಾದರೆ ಶೇಕಡಾ 22 ರಷ್ಟು ಜನರು ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್‌ಗೆ ಮತ್ತು ಶೇಕಡಾ 20 ರಷ್ಟು ಜನರು ನಗದು ಪಾವತಿಗೆ ಮರಳಲಿದ್ದಾರೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.