
80ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಶಸ್ತ್ರ ಪಡೆಗಳ ಸಿಬ್ಬಂದಿಗೆ 13 ಮರಣೋತ್ತರ ಪ್ರಶಸ್ತಿಗಳು ಸೇರಿದಂತೆ ಒಟ್ಟು 78 ಶೌರ್ಯ ಪ್ರಶಸ್ತಿಗಳನ್ನು ನೀಡಲು ಅನುಮೋದನೆ ನೀಡಿದ್ದಾರೆ.
ಈ ಪಟ್ಟಿಯಲ್ಲಿ 9 ಕೀರ್ತಿ ಚಕ್ರಗಳು, 19 ಶೌರ್ಯ ಚಕ್ರಗಳು, 36 ಸೇನಾ ಪದಕಗಳು, 3 ನೌಕಾ ಸೇನಾ ಪದಕಗಳು ಮತ್ತು 5 ವಾಯು ಸೇನಾ ಪದಕಗಳು ಸೇರಿವೆ.
ಭಾರತೀಯ ಸೇನೆಯ ಪ್ಯಾರಾಶೂಟ್ ರೆಜಿಮೆಂಟ್ನ ಮೂವರು ಅಧಿಕಾರಿಗಳಿಗೆ ಕೀರ್ತಿ ಚಕ್ರ ಲಭಿಸಿದ್ದು, ಉಳಿದ 6 ಕೀರ್ತಿ ಚಕ್ರಗಳು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂದಿಗೆ ಮರಣೋತ್ತರವಾಗಿ ಸಂದಿವೆ.