
ಭತದ ಎಸ್ಸಾರ್ ಗ್ರೂಪ್ ತನ್ನ ಯುಎಸ್ ಅಂಗಸಂಸ್ಥೆಯಾದ ಮೆಸಾಬಿ ಮೆಟಾಲಿಕ್ಸ್ ಮೂಲಕ ಅಯೋವಾದಲ್ಲಿ 18 ಬಿಲಿಯನ್ ಯುಎಸ್ ಡಾಲರ್ ಹೂಡಿಕೆಯಲ್ಲಿ ಅಮೆರಿಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಉಕ್ಕಿನ ಸ್ಥಾವರವನ್ನು ನಿರ್ಮಿಸುವುದಾಗಿ ಪ್ರಕಟಿಸಿದೆ.
ಶ್ವೇತಭವನದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಮ್ಮುಖದಲ್ಲಿ ಈ ಯೋಜನೆಯನ್ನು ಘೋಷಿಸಲಾಗಿದ್ದು, ಇದು ವಾರ್ಷಿಕವಾಗಿ 10 ಮಿಲಿಯನ್ ಟನ್ ಉಕ್ಕನ್ನು ಉತ್ಪಾದಿಸುವ ಗುರಿ ಹೊಂದಿದೆ ಮತ್ತು 6,000 ತಾತ್ಕಾಲಿಕ ಹಾಗೂ 2,000 ಕಾಯಂ ಉದ್ಯೋಗಗಳನ್ನು ಸೃಷ್ಟಿಸಲಿದೆ.
ಈ ಘಟಕಕ್ಕೆ ಅಗತ್ಯವಿರುವ ಕಚ್ಚಾ ಕಬ್ಬಿಣದ ಅದಿರನ್ನು ಮಿನ್ನೇಸೋಟದಲ್ಲಿರುವ ಕಂಪನಿಯ ಸ್ವಂತ ಗಣಿಗಳಿಂದ ಸರಬರಾಜು ಮಾಡಿಕೊಳ್ಳಲಾಗುವುದು ಎಂದು ಮೆಸಾಬಿ ಮೆಟಾಲಿಕ್ಸ್ ಅಧ್ಯಕ್ಷ ರೇವಂತ್ ರುಯಾ ತಿಳಿಸಿದ್ದಾರೆ.