
ಹಬ್ಬದ ಸೀಸನ್ ಆರಂಭವಾಗುತ್ತಿದ್ದಂತೆ ಸಕ್ಕರೆ ಮತ್ತು ಬೆಲ್ಲದ ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದು, ಗ್ರಾಹಕರಿಗೆ ಆರ್ಥಿಕ ಹೊರೆಯಾಗಿದೆ.
ಸಕ್ಕರೆ ದರ ಕೆಜಿಗೆ 50-55 ರೂ.ನಿಂದ 70-75 ರೂ.ಗೆ ಏರಿದ್ದರೆ, ಬೆಲ್ಲದ ಬೆಲೆ ಕ್ವಿಂಟಾಲ್ಗೆ 4,500 ರೂ.ನಿಂದ 6,500-7,000 ರೂ.ಗೆ ತಲುಪಿದೆ.
ಕಬ್ಬಿನ ಪೂರೈಕೆ ಕೊರತೆ ಮತ್ತು ಮಳೆಯ ಅಭಾವದಿಂದ ಇಳುವರಿ ಅರ್ಧದಷ್ಟು ಕುಸಿದಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವೆಂದು ವ್ಯಾಪಾರಸ್ಥರು ತಿಳಿಸಿದ್ದಾರೆ.