
ನವದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಆಗಸ್ಟ್ 17 ರಿಂದ 23ರವರೆಗೆ ನಡೆಯಲಿರುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಪಿ.ವಿ. ಸಿಂಧುಗೆ 9ನೇ ಶ್ರೇಯಾಂಕ ನೀಡಲಾಗಿದೆ.
ಪುರುಷರ ಡಬಲ್ಸ್ನಲ್ಲಿ ಸಾತ್ವಿಕ್ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ 5ನೇ ಶ್ರೇಯಾಂಕ ಪಡೆದಿದ್ದರೆ, ಲಕ್ಷ್ಯ ಸೇನ್ 14ನೇ ಶ್ರೇಯಾಂಕ ಪಡೆದಿದ್ದಾರೆ.
ಮಿಶ್ರ ಡಬಲ್ಸ್ನಲ್ಲಿ ಧ್ರುವ್ ಕಪಿಲ ಮತ್ತು ತನಿಶಾ ಕ್ರಾಸ್ಟೊ ಅವರಿಗೆ 15ನೇ ಶ್ರೇಯಾಂಕ ನೀಡಲಾಗಿದ್ದು, ಚಾಂಪಿಯನ್ಷಿಪ್ನ ಡ್ರಾ ಸಮಾರಂಭ ಬುಧವಾರ ನಡೆಯಲಿದೆ.