
ಕೇರಳದ 24 ವರ್ಷದ ತಾನ್ಯಾ ನಾಥನ್ ಅವರು ಕೇರಳ ನ್ಯಾಯಾಂಗ ಸೇವಾ ಪರೀಕ್ಷೆಯಲ್ಲಿ ಅಂಗವೈಕಲ್ಯ ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿ ರಾಜ್ಯದ ಮೊದಲ ದೃಷ್ಟಿಹೀನ ನ್ಯಾಯಾಧೀಶೆಯಾಗಿದ್ದಾರೆ.
ಸುಪ್ರೀಂ ಕೋರ್ಟ್ 2025ರಲ್ಲಿ ನೀಡಿದ ತೀರ್ಪಿನಿಂದ ಪ್ರೇರಿತರಾದ ತಾನ್ಯಾ, ಬ್ರೈಲ್ ನೋಟ್ಸ್ ಮತ್ತು ಸ್ಕ್ರೀನ್-ರೀಡಿಂಗ್ ಸಾಫ್ಟ್‌ವೇರ್ ಬಳಸಿ ಪರೀಕ್ಷೆಗೆ ತಯಾರಿ ನಡೆಸಿದ್ದರು.
ಅದೇ ವಿಭಾಗದಲ್ಲಿ ಸೆರೆಬ್ರಲ್ ಪಾಲ್ಸಿಯಿಂದ ಬಳಲುತ್ತಿರುವ ಜಾಯ್ಸನ್ ಸಜನ್ ಎರಡನೇ ಸ್ಥಾನ ಪಡೆದಿದ್ದು, ಇಬ್ಬರೂ ವಿಶೇಷ ಚೇತನರ ಸಾಧನೆಗೆ ಮಾದರಿಯಾಗಿದ್ದಾರೆ.