
ಬ್ಯಾಟರ್ಗಳ ಅಬ್ಬರಕ್ಕೆ ಬ್ರೇಕ್ ಹಾಕಿ ಬೌಲರ್ಗಳಿಗೆ ಸಮಾನ ಅವಕಾಶ ನೀಡಲು ಐಸಿಸಿ ಏಕದಿನ ಕ್ರಿಕೆಟ್ನಲ್ಲಿ ಹೊಸ ಬಾಲ್ ಬದಲಾವಣೆ ನಿಯಮವನ್ನು ಜಾರಿಗೆ ತಂದಿದೆ.
ಹೊಸ ನಿಯಮದ ಪ್ರಕಾರ ಇನ್ನಿಂಗ್ಸ್ನ ಮೊದಲ 34 ಓವರ್ಗಳವರೆಗೆ ಮಾತ್ರ ಎರಡು ಹೊಸ ಚೆಂಡುಗಳನ್ನು ಬಳಸಲಾಗುತ್ತದೆ ಮತ್ತು 35ನೇ ಓವರ್ನಿಂದ ಕೊನೆಯವರೆಗೂ ಒಂದೇ ಚೆಂಡನ್ನು ಬಳಸಲಾಗುತ್ತದೆ.
ಈ ನಿಯಮದಿಂದ ಪಂದ್ಯದ ಕೊನೆಯ ಓವರ್ಗಳಲ್ಲಿ ವೇಗದ ಬೌಲರ್ಗಳಿಗೆ ರಿವರ್ಸ್ ಸ್ವಿಂಗ್ ಮಾಡಲು ಹಾಗೂ ಸ್ಪಿನ್ನರ್ಗಳಿಗೆ ಹೆಚ್ಚು ತಿರುವು ಪಡೆಯಲು ನೆರವಾಗಲಿದೆ.