
ಮಳೆಗಾಲದಲ್ಲಿ ಅಕ್ಕಿ ಮತ್ತು ಬೇಳೆಗಳಲ್ಲಿ ಹುಳುಗಳಾಗುವುದನ್ನು ತಡೆಯಲು ಧಾನ್ಯಗಳನ್ನು 2-3 ಗಂಟೆಗಳ ಕಾಲ ಬಿಸಿಲಿನಲ್ಲಿ ಒಣಗಿಸುವುದು ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ.
ಅಕ್ಕಿ ಡಬ್ಬದಲ್ಲಿ ಬಿರಿಯಾನಿ ಎಲೆ, ಲವಂಗ, ದಾಲ್ಚಿನ್ನಿ ಅಥವಾ ಸಿಪ್ಪೆ ತೆಗೆಯದ 5-6 ಬೆಳ್ಳುಳ್ಳಿ ಎಸಳುಗಳನ್ನು ಇಡುವುದರಿಂದ ಕೀಟಗಳು ದೂರ ಉಳಿಯುತ್ತವೆ.
ವಿನೆಗರ್ ಮತ್ತು ಇಂಗಿನ ಮಿಶ್ರಣವನ್ನು ಸಣ್ಣ ಬಟ್ಟಲಿನಲ್ಲಿ ಡಬ್ಬದ ಮಧ್ಯದಲ್ಲಿ ಇಡುವುದರಿಂದ ಅದರ ಕಟುವಾದ ವಾಸನೆಗೆ ಹುಳುಗಳು ಸಂಪೂರ್ಣವಾಗಿ ಮಾಯವಾಗುತ್ತವೆ ಎಂದು ಸಲಹೆ ನೀಡಲಾಗಿದೆ.