
ಜಪಾನ್ನ ಐಚಿ-ನಗೋಯಾದಲ್ಲಿ ಸೆಪ್ಟೆಂಬರ್ 19ರಿಂದ ಅಕ್ಟೋಬರ್ 4ರವರೆಗೆ ನಡೆಯಲಿರುವ 20ನೇ ಏಷ್ಯನ್ ಗೇಮ್ಸ್ನಲ್ಲಿ ಪಾಲ್ಗೊಳ್ಳುವ ಭಾರತೀಯ ಕ್ರೀಡಾಪಟುಗಳಿಗೆ ವಿಶೇಷ ವಸತಿ ವ್ಯವಸ್ಥೆ ಮಾಡಲಾಗಿದೆ.
ಕ್ರೀಡಾ ಗ್ರಾಮದ ಹೊರಗೆ 40x8 ಅಡಿಗಳ ಕಂಟೇನರ್ ಕೊಠಡಿಗಳನ್ನು ನಿರ್ಮಿಸಲಾಗಿದ್ದು, ಪಟಿಯಾಲ ಮತ್ತು ಬೆಂಗಳೂರಿನಲ್ಲಿ ಇದೇ ಮಾದರಿಯ ಕೊಠಡಿಗಳಲ್ಲಿ ಆಟಗಾರರಿಗೆ ತರಬೇತಿ ನೀಡಲಾಗುತ್ತಿದೆ.
ಒಟ್ಟು 4,600 ಕ್ರೀಡಾಪಟುಗಳು ಕ್ರೂಸ್ ನೌಕೆಯಲ್ಲಿ ಮತ್ತು 2,400 ಮಂದಿ ಕಂಟೇನರ್ ವಸತಿಗಳಲ್ಲಿ ತಂಗಲಿದ್ದು, ಉಳಿದವರಿಗೆ ಹೋಟೆಲ್ಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.