
ಹಾಸನ ಜಿಲ್ಲೆಯಲ್ಲಿ ಸೆಪ್ಟೆಂಬರ್ 11ರಂದು ಒಂದೇ ದಿನ ಇಬ್ಬರು ಸರ್ಕಾರಿ ನೌಕರರು ಹೃದಯಾಘಾತಕ್ಕೆ ಬಲಿಯಾಗಿದ್ದು, ಸರ್ಕಾರಿ ನೌಕರರಲ್ಲಿ ಆತಂಕ ಮೂಡಿಸಿದೆ.
ಶಿಕ್ಷಣ ಇಲಾಖೆಯ 45 ವರ್ಷದ ಅಧಿಕಾರಿ ವೇಣುಗೋಪಾಲ್ ಹಾಗೂ ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ 55 ವರ್ಷದ ಡಾಕ್ಟರ್ ವೆಂಕಟೇಶ್ ಮೃತಪಟ್ಟಿದ್ದಾರೆ.
ಾರದ ಹಿಂದೆ ನಡೆದ 17 ವರ್ಷದ ಬಾಲಕನ ಸಾವಿನ ಬಳಿಕ ಈ ಘಟನೆ ನಡೆದಿರುವುದು ಜಿಲ್ಲೆಯಲ್ಲಿ ಸರಣಿ ಹೃದಯಘಾತ ಪ್ರಕರಣಗಳ ಅನುಮಾನವನ್ನು ಮತ್ತೆ ಹುಟ್ಟುಹಾಕಿದೆ.